ಬನವಾಸಿ ಬಳಗ

ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಕನ್ನಡ ದೇಶಮಂ

ಹೊತ್ತಗೆಗಳು

“ಕರ್ನಾಟಕವೊಂದೇ… ಒಡಕು ತರಲಿದೆ ಕೆಡಕು”

kv_1
ಕರ್ನಾಟಕವನ್ನು ಒಡೆಯಬೇಕು ಅನ್ನುವ ಕೂಗು ಎದ್ದಿರುವ ಹೊತ್ತಿನಲ್ಲಿ ಕರ್ನಾಟಕ ಯಾಕೆ ಒಂದಾಗಿರಬೇಕು, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಿಗರ ನಡುವೆ ರಾಜಕೀಯವಾದ ಒಗ್ಗಟ್ಟು ಕನ್ನಡಿಗರೆಲ್ಲರ ಏಳಿಗೆಗೆ ಯಾಕೆ ಮುಖ್ಯ ಅನ್ನುವ ಬಗ್ಗೆ ಕೆಲ ಹೊಸ ಆಯಾಮಗಳನ್ನು ಕನ್ನಡಿಗರ ಮುಂದಿಡುವ ಪ್ರಯತ್ನವನ್ನು “ಕರ್ನಾಟಕವೊಂದೇ” ಹೆಸರಿನ ಈ ಹೊತ್ತಗೆಯಲ್ಲಿ ಮಾಡಲಾಗಿದೆ. ಕನ್ನಡಿಗರು ಒಗ್ಗಟ್ಟನ್ನು ಯಾವ ಕಾರಣಕ್ಕೂ ಒಡೆದುಕೊಳ್ಳದೇ, ಕನ್ನಡಿಗರೆಲ್ಲರ ಏಳಿಗೆ ಸಾಧ್ಯವಾಗಿಸುವ ಬಗ್ಗೆ ಎಂಟು ಚಿಕ್ಕ ಅಧ್ಯಾಯಗಳಲ್ಲಿ ಚಿಂತನೆಗೆ ಹಚ್ಚುವ ವಾದವನ್ನು ಈ ಹೊತ್ತಗೆಯಲ್ಲಿ ಮಂಡಿಸಲಾಗಿದೆ.
“ಕರ್ನಾಟಕವೊಂದೇ” ಹೊತ್ತಗೆಯನ್ನು ಮಿಂಬಲೆಯಲ್ಲಿ (ಆನ್‍ಲೈನ್) ಕೊಂಡುಕೊಳ್ಳಲು ಈ ಕೊಂಡಿಗೆ ಭೇಟಿ ಕೊಡಿ: http://totalkannada.com/karnatakavonde–26126

“ಕರ್ನಾಟಕವೊಂದೇ” – ಹೊತ್ತಗೆಯ ಬಗ್ಗೆ ಬರಹಗಾರರಾದ ಶ್ರೀ ವಸಂತ್ ಶೆಟ್ಟಿ ಅವರ ಮಾತು.

ಕನ್ನಡ ಡಿಂಡಿಮ!

Dindima
ಬನವಾಸಿ ಬಳಗ ಶುರುವಾದ 5ನೇ ವರ್ಶದ ನೆನಪಿಗಾಗಿ 2009 ರಿಂದೀಚೆಗಿನ “ಏನ್ ಗುರು” ಬರಹಗಳನ್ನು ಆಯ್ದು 5 ಸರಣಿ ಹೊತ್ತಗೆಗಳಾಗಿ ಹೊರತರಲಾಗಿದೆ.
ಕನ್ನಡಿಗರ ನಿಜಗುರುತು, ಹೊರ ಜಗತ್ತಿನೊಂದಿಗೆ ನಮ್ಮ ಕೊಡುಕೊಳ್ಳುವಿಕೆ, ನಮ್ಮ ಬದುಕಿನ ಮೇಲೆ ಪ್ರಭಾವ ಬೀರುತ್ತಿರುವ, ನಮ್ಮ ಬದುಕನ್ನು ನಿಯಂತ್ರಿಸುತ್ತಿರುವ ಅನೇಕ ಅಂಶಗಳು – ಅವು ಬೀರುತ್ತಿರುವ ಪರಿಣಾಮಗಳು – ಇವೆಲ್ಲವನ್ನೂ ಯಾವುದೇ ತೆರೆಯಿರದೆ ನೋಡುವ ಪ್ರಯತ್ನವನ್ನು ಈ ಹೊತ್ತಗೆಗಳಲ್ಲಿ ಮಾಡಲಾಗಿದೆ. ಈ ದಿಟಗಳು ಕನ್ನಡಿಗರ ಅರಿವಿಗೆ ಬಂದಲ್ಲಿ ಒಬ್ಬೊಬ್ಬರ ಎದೆಯೊಳಗೂ ಇರುವ ಹ್ರುದಯ ಶಿವ, ಎಲ್ಲರಲ್ಲೂ ನಿಜ ಎಚ್ಚರದ ಕನ್ನಡ ಡಿಂಡಿಮವನ್ನು ನುಡಿಸುವುದು ಖಂಡಿತಾ! ಈ ಹಿನ್ನೆಲೆಯಲ್ಲಿ ನಮ್ಮ ಹೊತ್ತಗೆಗೆ “ಕನ್ನಡ ಡಿಂಡಿಮ” ಎಂದು ಹೆಸರಿಡಲಾಗಿದೆ.
“ಕನ್ನಡ ಡಿಂಡಿಮ!” ಹೊತ್ತಗೆಯು “ಟೋಟಲ್ ಕನ್ನಡ” ಮತ್ತು “ನವಕರ್ನಾಟಕ ಪ್ರಕಾಶನ” ಹೊತ್ತಗೆ ಮಳಿಗೆಗಳಲ್ಲಿ ಕೊಂಡುಕೊಳ್ಳಲು ಸಿಗುತ್ತಿದೆ. ಹೊತ್ತಗೆಯನ್ನು ಕೊಂಡು ಓದಿ.

“ಕನ್ನಡ ಡಿಂಡಿಮ” ಹೊತ್ತಗೆಯನ್ನು ಮಿಂಬಲೆಯಲ್ಲಿ (ಆನ್‍ಲೈನ್) ಕೊಂಡುಕೊಳ್ಳಲು ಈ ಕೊಂಡಿಗೆ ಭೇಟಿ ಕೊಡಿ:
http://totalkannada.com/kannada-dimdima-%28set-of-5-books%29–TKS25453

“ಕನ್ನಡ ಡಿಂಡಿಮ!” – ಹೊತ್ತಗೆಯ ಬಗ್ಗೆ ಬರಹಗಾರರಾದ ಶ್ರೀ.ಜಿ.ಆನಂದ್ ಅವರ ಮಾತು

ಏನ್ ಗುರು ಕಾಫಿ ಆಯ್ತಾ?

೨೦೦೭ರಲ್ಲಿ ಬನವಾಸಿ ಬಳಗದ “ಏನ್ ಗುರು ಕಾಫಿ ಆಯ್ತಾ?” ಅಂಕಣಮಾಲೆಯನ್ನು ಶುರುಮಾಡಲಾಯ್ತು. ಇದಕ್ಕೆ ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ, ಉತ್ತೇಜನ ಸಿಕ್ಕಿತು. ಈ ಬರಹಗಳನ್ನು ಬರೀತಾ ಬರೀತಾನೇ ನಮ್ಮ ಚಿಂತನೆಗಳೂ ಸ್ಪಷ್ಟರೂಪ ತೆಗೆದುಕೊಳ್ಳುತ್ತಾ ಸಾಗಿದ್ದು ಸುಳ್ಳಲ್ಲ. ಈ ಬ್ಲಾಗು ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಜನ ಓದುಗರನ್ನು ಮುಟ್ಟಿದೆ. ಮತ್ತಷ್ಟು ಜನರನ್ನು ಮುಟ್ಟುವ ಉದ್ದೇಶದಿಂದ ಹೊತ್ತಗೆಯ ರೂಪದಲ್ಲಿ ಏನ್ ಗುರುವನ್ನು ಹೊರತರಲಾಯಿತು. ಶುರುವಾದಾಗಿನಿಂದ 2008ರ ಕೊನೆಯವರೆಗಿನ ಬರಹಗಳನ್ನು ಆಯ್ದು ಹೆಕ್ಕಿ, ಈ ಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. ಮೊದಲ ಮುದ್ರಣವನ್ನು ಸಾಹಿತ್ಯ, ಚಿಂತಕರು, ಸಂಘ, ಸಂಸ್ಥೆಗಳು ಸೇರಿದಂತೆ ನಾಡಿನ ಹಲವಾರು ಗಣ್ಯರಿಗೆ ತಲುಪಿಸಲಾಗಿದೆ. ಎರಡನೆ ಮುದ್ರಣವನ್ನು ಸಾಹಿತ್ಯ ಸಮ್ಮೇಳನದಲ್ಲಿ ಜನರ ಮುಂದೆ ಕೊಳ್ಳಲು ಇರಿಸಲಾಯಿತು. ಕೇವಲ ಮೂರೇ ದಿನದಲ್ಲಿ ಅಷ್ಟೂ ಪ್ರತಿಗಳು ಖಾಲಿಯಾದವು. ಇದೀಗ ಎರಡನೇ ಬಾರಿ ಅಚ್ಚು ಹಾಕಲಾಗಿದ್ದು ಸದ್ಯ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಹೀಗೆ ೨೦೦೯ರಲ್ಲಿ ಹೊರತಂದ ಹೊತ್ತಗೆ “ಏನ್ ಗುರು? ಕಾಫಿ ಆಯ್ತಾ…” ಎರಡು ಭಾಗಗಳಲ್ಲಿ ಹೊರತಂದ ಈ ಹೊತ್ತಗೆ ಜನರ ಗಮನ ಸೆಳೆಯಲು ಯಶಸ್ವಿಯಾದ ಈ ಹೊತ್ತಗೆ ನಮ್ಮನ್ನು ಬೇರೆ ಬೇರೆ ಹೊತ್ತಗೆಗಳನ್ನು ಹೊರತರಲು ಕಾರಣವಾಯಿತು. ಬನವಾಸಿ ಬಳಗವು ಮೊದಲು ಎರಡು ಭಾಗಗಳಲ್ಲಿ ಹೊರತಂದಿದ್ದ “ಏನ್ ಗುರು? ಕಾಫಿ ಆಯ್ತಾ…” ಹೊತ್ತಗೆಗಳನ್ನು ಒಗ್ಗೂಡಿಸಿ ಮತ್ತೊಂದು ಅವ್ರುತ್ತಿಯನ್ನು ಹೊರತರಲಾಯಿತು. ಏನ್ ಗುರು ಕಾಫಿ ಆಯ್ತಾ ? ಹೊತ್ತಗೆಯನ್ನು ಮಿಂಬಲೆಯಲ್ಲಿ (ಆನ್‍ಲೈನ್) ಕೊಂಡುಕೊಳ್ಳಲು ಈ ಕೊಂಡಿಗೆ ಭೇಟಿ ಕೊಡಿ:
http://totalkannada.com/enguru-coffee-aaitha–TKB18512

“ಏನ್ ಗುರು ಕಾಫಿ ಆಯ್ತಾ?” – ಹೊತ್ತಗೆಯ ಬಗ್ಗೆ ಬರಹಗಾರರಾದ ಶ್ರೀ.ಜಿ.ಆನಂದ್ ಅವರ ಮಾತು.

ಹಿಂದೀ ಹೇರಿಕೆ: ಮೂರು ಮಂತ್ರ ನೂರು ತಂತ್ರ

ಭಾರತದ ಭಾಷಾನೀತಿಯ ಬಗ್ಗೆ, ಅದರ ಹುಳುಕುಗಳ ಬಗ್ಗೆ, ಈ ಭಾಷಾನೀತಿಯಿಂದಾಗಿ ಕನ್ನಡಿಗರ ಬದುಕಿನ ಮೇಲಾಗಿರುವ ಆಗಲಿರುವ ಪರಿಣಾಮಗಳ ಬಗ್ಗೆ ಬರೆಯಲಾದ ಅಧ್ಯಯನಪೂರ್ವಕವಾದ ಹೊತ್ತಗೆ “ಹಿಂದೀ ಹೇರಿಕೆ: ಮೂರುಮಂತ್ರ ನೂರು ತಂತ್ರ”. ಈ ಹೊತ್ತಗೆಯನ್ನು ಓದಿದ ಅದೆಷ್ಟೋ ಮಂದಿ ಭಾರತದ ಭಾಷಾನೀತಿಯ ಬಗ್ಗೆ, ಹಿಂದೀ ಭಾಷೆಯೆಡೆಗಿನ ಅನಿಸಿಕೆ ನಂಬಿಕೆಗಳನ್ನು ಬದಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಹಿಂದಿ ಹೇರಿಕೆ  – ಮೂರು ಮಂತ್ರ ನೂರು ತಂತ್ರ ಹೊತ್ತಗೆಯನ್ನು ಮಿಂಬಲೆಯಲ್ಲಿ (ಆನ್‍ಲೈನ್) ಕೊಂಡುಕೊಳ್ಳಲು ಈ ಕೊಂಡಿಗೆ ಭೇಟಿ ಕೊಡಿ

http://totalkannada.com/hindi-herike-(mooru-manthra—nooru-thanthra)–TKB20348

“ಹಿಂದೀ ಹೇರಿಕೆ: ಮೂರು ಮಂತ್ರ ನೂರು ತಂತ್ರ”
– ಹೊತ್ತಗೆಯ ಬಗ್ಗೆ ಬರಹಗಾರರಾದ ಶ್ರೀ.ಜಿ.ಆನಂದ್ ಅವರ ಮಾತು.

ಬೆಳಗಲಿ ನಾಡ ನಾಳೆಗಳು: ಕಲಿಕಾ ವ್ಯವಸ್ಥೆಗೊಂದು ಕೈಮರ

ಯಾವುದೇ ನಾಡಿನ ಏಳಿಗೆಯಲ್ಲಿ ಕಲಿಕೆ ಏರ್ಪಾಡಿನ ಪಾತ್ರ ಬಹು ಮಹತ್ವದ್ದಾಗಿರುತ್ತದೆ. ತಾಯ್ನುಡಿಯಲ್ಲಿ ಕಲಿಕೆಯೇ ಪರಿಣಾಮಕಾರಿಯಾದುದು ಎಂಬುದನ್ನು ಜಗತ್ತಿನ ಎಲ್ಲಾ ಶಿಕ್ಷಣ ತಜ್ಞರೂ, ನುಡಿಯರಿಗರೂ ಸಾರಿ ಹೇಳುತ್ತಿದ್ದೂ, ತಾಯ್ನುಡಿಯಲ್ಲಿಯೇ ಎಲ್ಲವನ್ನೂ ಕಲಿಯುವ ಹಲದೇಶಗಳು ಏಳಿಗೆಯ ಮೆಟ್ಟಿಲಲ್ಲಿ ತುಂಬಾ ಮೇಲೇರಿ ನಿಂತಿರುವುದು ನಮ್ಮ ಕಣ್ಣಮುಂದೆ ಇದ್ದರೂ, ನಮ್ಮ ಕನ್ನಡ ನಾಡಿನಲ್ಲಿ ಕನ್ನಡದಲ್ಲೇ ಎಲ್ಲಾ ಬಗೆಯ ಕಲಿಕೆ ಸಿಗುಬಹುದಾದಂತಹ ವ್ಯವಸ್ಥೆ ಕಟ್ಟಲಾಗಿಲ್ಲ ಎಂದೇ ಹೇಳಬಹುದು. ಮೊದಲ ಹಂತದ ಕಲಿಕೆಯಿಂದಾ ಹಿಡಿದು, ಮೇಲ್ಮಟ್ಟದ ಕಲಿಕೆಯವರೆಗೂ, ಕನ್ನಡದಲ್ಲಿಯೇ ಕಲಿಯಬಹುದಾದಂತಹ ಏರ್ಪಾಡು ಕನ್ನಡಿಗರಿಗೆ ಸಾಕಷ್ಟು ಒಳಿತು ಮಾಡಬಲ್ಲುದಾಗಿದೆ. ಆ ಮೂಲಕವೇ, ನಮ್ಮ ನಾಡಿನ ನಾಳೆಗಳು ಬೆಳಗಬಹುದಾಗಿವೆ. ಇಂತಹ ಒಂದು ಏರ್ಪಾಡು ಕಟ್ಟಿಕೊಂಡಿರುವ ನಾಡುಗಳು ಮಾತ್ರ ಇಂದು ಮುಂದುವರೆದ ನಾಡುಗಳೆನಿಸಿಕೊಂಡಿವೆ. ನಮ್ಮ ನಾಡಿನಲ್ಲೂ ಜ್ಞಾನವು ಜನರಾಡುವ ನುಡಿಯಲ್ಲಿ ದೊರಕುವಂತಾಗಬೇಕು, ಮತ್ತು, ಆ ಮೂಲಕ ಜ್ಞಾನವು ಎಲ್ಲಾ ಕನ್ನಡಿಗರಿಗೆ ಒದಗುವಂತಿರಬೇಕು ಎಂಬ ಆಶಯ ವ್ಯಕ್ತಪಡಿಸುವ ಈ ಹೊತ್ತಗೆಯನ್ನು ಸಂಪಾದಿಸಲಾಗಿದೆ. ಅಂತಹ ಒಂದು ಏರ್ಪಾಡು ಕಟ್ಟಲು ನಮ್ಮ ಮುಂದಿರುವ ತೊಡಕುಗಳೇನು, ಅವುಗಳನ್ನು ನಿವಾರಿಸಿಕೊಳ್ಳುವ ದಾರಿಗಳಾವುವು, ಕಟ್ಟುವ ಕೆಲಸದಲ್ಲಿ ಯಾರೆಲ್ಲಾ ಪಾಲ್ಗೊಳ್ಳಬಹುದಾಗಿದೆ, ಬೇರೆ ಬೇರೆ ಆಯಾಮಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಬೇಕಾಗಿದೆ ಎಂಬ ಬಗ್ಗೆ ಚರ್ಚೆಗಳೂ ಈ ಹೊತ್ತಗೆಯಲ್ಲಿ ಕಂಡುಬರುತ್ತವೆ.

ಬೆಳಗಲಿ ನಾಡ ನಾಳೆಗಳು ಹೊತ್ತಗೆಯನ್ನು ಮಿಂಬಲೆಯಲ್ಲಿ (ಆನ್‍ಲೈನ್) ಕೊಂಡುಕೊಳ್ಳಲು ಈ ಕೊಂಡಿಗೆ ಭೇಟಿ ಕೊಡಿ

http://totalkannada.com/belagali-naada-naalegalu–TKB22440

“ಬೆಳಗಲಿ ನಾಡ ನಾಳೆಗಳು” – ಹೊತ್ತಗೆ ಕುರಿತು ಹೊತ್ತಗೆಯ ಸಂಪಾದಕರಾದ ಶ್ರೀ.ಪ್ರಿಯಾಂಕ್ ಕತ್ತಲಗಿರಿ ಅವರ ಮಾತು.

ಮಂದಿಯಾಳ್ವಿಕೆಯಲ್ಲಿ ಕನ್ನಡಿಗ

Mumputa 5x8

ಭಾರತವು ಒಂದು ಮಂದಿಯಾಳ್ವಿಕೆ(ಪ್ರಜಾಪ್ರಭುತ್ವ) ಎಂದು ಕರೆಯಿಸಿಕೊಳ್ಳುತ್ತದೆ. ಕನ್ನಡ-ಕನ್ನಡಿಗ-ಕರ್ನಾಟಕಗಳು ಭಾರತದ ಮಂದಿಯಾಳ್ವಿಕೆಯಲ್ಲಿ ಎಂತಹ ಸ್ಥಾನ ಪಡೆದುಕೊಂಡಿವೆ ಎಂಬ ಪ್ರಶ್ನೆಯನ್ನರಸುತ್ತಾ ಬರೆಯಲಾದ ಅಂಕಣಗಳ ಸಂಕಲನವೇ “ಮಂದಿಯಾಳ್ವಿಕೆಯಲ್ಲಿ ಕನ್ನಡಿಗ” ಹೊತ್ತಗೆ. ರಾಜಕೀಯವೆಂಬುದು ಕೆಟ್ಟದು ಎಂದು ನೋಡುತ್ತಾ, ಕನ್ನಡಿಗರು ರಾಜಕೀಯವಾಗಿ ಚಿಂತಿಸುವುದನ್ನೇ ಬಿಟ್ಟು ರಾಜಕೀಯ ಪ್ರಜ್ಞೆಯನ್ನು ಕಳೆದುಕೊಂಡಂತಾಗಿದ್ದಾರೆ, ಅದರಿಂದಾಗಿ ಕನ್ನಡಿಗರು ಎದುರಿಸುತ್ತಿರುವ ತೊಂದರೆಗಳೇನು ಎಂಬ ವಿಷಯವನ್ನು ಈ ಹೊತ್ತಗೆಯಲ್ಲಿ ಹೆಚ್ಚಾಗಿ ಚರ್ಚಿಸಲಾಗಿದೆ.  ನಾಡಿನ ಹೊಸ ತಲೆಮಾರಿನ ಚಿಂತಕರಾದ ಶ್ರೀ ಕಿರಣ್ ಬಾಟ್ನಿ ಅವರು ಬರೆದಿರುವ ಈ ಹೊತ್ತಗೆಯಲ್ಲಿನ ಅಂಕಣಗಳು ’ಹೊಸಬರಹ’ದಲ್ಲಿದೆ.

ಈ ಹೊತ್ತಗೆಯನ್ನು ಮಿಂಬಲೆಯಲ್ಲಿ (ಆನ್‍ಲೈನ್) ಕೊಂಡುಕೊಳ್ಳಲು ಈ ಕೊಂಡಿಗೆ ಭೇಟಿ ಕೊಡಿ
http://totalkannada.com/mandiyaalvikeyalli-kannadiga–TKB23009

ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ


swatantra_bharatadalli_atantra_karnatakaಶ್ರೀ ಆನಂದ್ ಅವರು ಬರೆದಿರುವ ಈ ಹೊತ್ತಗೆಯು, ರಾಷ್ಟ್ರೀಯ ಪಕ್ಷಗಳ ಆಳ್ವಿಕೆಯಲ್ಲಿ ಕರ್ನಾಟಕವು ಪಡೆದುಕೊಂಡಿದ್ದೆಷ್ಟು, ಕಳೆದುಕೊಂಡಿದ್ದೆಷ್ಟು ಎಂಬುದನ್ನು ಅಂಕಿ-ಅಂಶಗಳ ಸಮೇತ ಓದುಗರ ಮುಂದಿಡುತ್ತದೆ. ನದಿ, ನೆಲ, ಅನುದಾನ, ಯೋಜನೆಗಳು ಹೀಗೆ ಪ್ರತಿಯೊಂದರಲ್ಲೂ ಪ್ರಾದೇಶಿಕ ಪಕ್ಷಗಳ ಆಳ್ವಿಕೆಯಲ್ಲಿರುವ ರಾಜ್ಯಗಳಿಗೆ ಹೋಲಿಸಿ ರಾಷ್ಟ್ರೀಯ ಪಕ್ಷಗಳ ಆಡಳಿತದಲ್ಲಿ ಕರ್ನಾಟಕ ಪಡೆದುಕೊಂಡಿರುವುದೇನು ಎಂಬುದನ್ನು ತೋರಿಸುತ್ತಾ, ಕರ್ನಾಟಕವು ಹೇಗೆ ಅತಂತ್ರವಾಗಿದೆ ಎಂಬುದನ್ನು ಓದುಗರ ಮುಂದಿಡುತ್ತದೆ ಈ ಹೊತ್ತಗೆ.

ಈ ಹೊತ್ತಗೆಯನ್ನು ಮಿಂಬಲೆಯಲ್ಲಿ (ಆನ್‍ಲೈನ್) ಕೊಂಡುಕೊಳ್ಳಲು ಈ ಕೊಂಡಿಗೆ ಭೇಟಿ ಕೊಡಿ
http://totalkannada.com/swathanthra-bhaaratadalli-athanthra-karnaataka–TKB23718

“ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ” – ಹೊತ್ತಗೆಯ ಬಗ್ಗೆ ಬರಹಗಾರರಾದ ಶ್ರೀ.ಜಿ.ಆನಂದ್ ಅವರ ಮಾತು.

ಏನ್ ಗುರು ಕಾಫಿ ಆಯ್ತಾ? ಬ್ಲಾಗ್