ಬನವಾಸಿ ಬಳಗ

ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಕನ್ನಡ ದೇಶಮಂ

ಮಾಧ್ಯಮದಲ್ಲಿ ನಮ್ಮ ಬಗ್ಗೆ

ಬನವಾಸಿ ಬಳಗ ಕನ್ನಡ, ಕನ್ನಡಿಗ ಹಾಗೂ ಕರ್ನಾಟಕದ ಸುತ್ತ ಹಲವಾರು ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ಕೆಲವು ವರದಿಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

“ಭಾರತಕ್ಕೊಪ್ಪೋ ಭಾಷಾನೀತಿ” ವಿಚಾರ ಸಂಕಿರಣ

“ಭಾರತಕ್ಕೊಪ್ಪೋ ಭಾಷಾನೀತಿ” ವಿಚಾರ ಸಂಕಿರಣ ಹಾಗೂ “ಹಿಂದಿ ಹೇರಿಕೆ – ಮೂರು ಮಂತ್ರ ನೂರು ತಂತ್ರ” ಎಂಬ ಭಾರತದ ಭಾಷಾ ನೀತಿಯ ಕುರಿತು ಇರುವ ಹೊತ್ತಗೆ ಬಿಡುಗಡೆ ಸಮಾರಂಭ ನಡೆಸಲಾಯಿತು. ಈ ಕಾರ್ಯಕ್ರಮದ ಕುರಿತು ಹಲವು ಪತ್ರಿಕೆಗಳಲ್ಲಿ ಮೂಡಿ ಬಂದಿರುವ ವರದಿಗಳನ್ನು ಇಲ್ಲಿ ನೋಡಬಹುದು.

ಮೇಲಕ್ಕೆ

ಪ್ರಜಾಪ್ರಭುತ್ವ ಮತ್ತು ಡಬ್ಬಿಂಗ್ ವಿಚಾರ ಸಂಕಿರಣ

ಕರ್ನಾಟಕದಲ್ಲಿ ಅಸಂವಿಧಾನಾತ್ಮಕ ಡಬ್ಬಿಂಗ್ ನಿಷೇಧದ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ “ಪ್ರಜಾಪ್ರಭುತ್ವ ಮತ್ತು ಡಬ್ಬಿಂಗ್” ಅನ್ನೋ ವಿಚಾರ ಸಂಕಿರಣವನ್ನು ಬೆಂಗಳೂರಿನ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಈ ವಿಚಾರ ಸಂಕಿರಣದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಡಬ್ಬಿಂಗ್ ವಿರೋಧಿಸುವುದರ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಇದರ ಬಗ್ಗೆ ಪತ್ರಿಕೆಗಳಲ್ಲಿ ಬಂದಿರುವ ವರದಿಗಳನ್ನು ಇಲ್ಲಿ ನೋಡಿ.

ಮೇಲಕ್ಕೆ

ನುಡಿಯರಿಮೆ ಮತ್ತು ಕಲಿಕೆ ಸಮ್ಮೇಳನ

ಫೆಬ್ರವರಿ 7, 2010ರ ಭಾನುವಾರದಂದು ಬನವಾಸಿ ಬಳಗ ಹಮ್ಮಿಕೊಂಡಿದ್ದ “ನುಡಿಯರಿಮೆ ಮತ್ತು ಕಲಿಕೆ” ಎಂಬ ಸಮ್ಮೇಳನದಲ್ಲಿ ನಾಡಿನ ಪ್ರಮುಖ ಭಾಷಾ ವಿಜ್ಞಾನಿಗಳಲ್ಲಿ ಮುಂಚೂಣಿಯಲ್ಲಿರುವ ನಾಡೋಜ ಡಾ. ಡಿ.ಎನ್.ಶಂಕರ್ ಬಟ್, ಡಾ. ಕೆ.ವಿ ನಾಯಾರಣ ಮತ್ತು ಡಾ.ಎನ್.ಎಸ್ ಶ್ರೀಧರ್ ಹಾಗೂ ಶಿಕ್ಷಣ ತಜ್ಞ ಡಾ. ಎನ್.ಎಸ್ ರಘುನಾಥ್ ಉಪನ್ಯಾಸ ನೀಡಿದರು. ಇದರ ಬಗ್ಗೆ ಈ ಸಂಜೆ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ.

ಮೇಲಕ್ಕೆ

ಎಲ್ಲರ ಕನ್ನಡ ಓದುಕೂಟ

ಭಾಷಾಧ್ಯಯನ ವೇದಿಕೆಯೊಡಗೂಡಿ ಬೆಂಗಳೂರಿನ ರಾಷ್ಟ್ರೀಯ ನರರೋಗ ಮತ್ತು ಮಾನಸಿಕ ಆರೋಗ್ಯ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ “ಎಲ್ಲರ ಕನ್ನಡ” ಓದುಕೂಟ-೨೦೧೧ ರ ಬಗ್ಗೆ ಉದಯವಾಣಿ ಪತ್ರಿಕೆಯಲ್ಲಿ ಬಂದಿರುವ ವರದಿ.

ಮೇಲಕ್ಕೆ

ಕನ್ನಡ ವಿಕ್ಷನರಿ ಮಾಹಿತಿಯ ಡಿಕ್ಷನರಿ

ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಪ್ರತಿಯೊಂದು ಮನೆಯನ್ನೂ ಪ್ರವೇಶಿಸುತ್ತದೆ, ಆ ಸಮಯಕ್ಕೆ ನಾವು ಕನ್ನಡವನ್ನ ತಂತ್ರಜ್ಞಾನ, ಅಂತರ್ಜಾಲ ಹಾಗೂ ಪ್ರತಿಯೊಂದು ಕಡೆಯಲ್ಲೂ ಬಳಕೆಗೆ ತರುವ ಹಂತಕ್ಕೆ ತಗೆದುಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಅಂತರ್ಜಾಲ ಕನ್ನಡ ಪದನರಿಕೆಯಾಗಿರುವ “ವಿಕ್ಷನರಿ” ಯಲ್ಲಿ ಪದಗಳನ್ನು ತುಂಬುವ ಕೆಲಸಕ್ಕೆ ಕೈಹಾಕಿದ ಹುರುಪಿನ ಯುವ ಮನಸ್ಸುಗಳಿಗೆ ಬನವಾಸಿ ಬಳಗ ಎಲ್ಲ ರೀತಿಯ ಬೆಂಬಲ ನೀಡಿತು. ಮೂರು ವರ್ಷಗಳ ಹಿಂದಿ 300 ಕ್ಕೂ ಕಡಿಮೆ ಪದಗಳನ್ನು ಹೊಂದಿದ್ದ ಕನ್ನಡ ವಿಕ್ಷನರಿಯಲ್ಲಿರುವ ಪದಗಳ ಸಂಖ್ಯೆ ಈಗ 2 ಲಕ್ಷ ದಾಟಿದೆ. ಈ ಕುರಿತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬಂದಿರುವ ವರದಿ

ಮೇಲಕ್ಕೆ

77 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬನವಾಸಿ ಬಳಗದ ಪುಸ್ತಕ ಮಳಿಗೆ

ಬೆಂಗಳೂರಿನಲ್ಲಿ ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬನವಾಸಿ ಬಳಗ, “ಬನವಾಸಿ ಬಳಗ ಪ್ರಕಾಶನ” ದ ಅಡಿಯಲ್ಲಿ “ಏನ್ ಗುರು ಕಾಫೀ ಆಯ್ತಾ?” ಬ್ಲಾಗ್ ನ ಆಯ್ದ ಕೆಲವು ಲೇಖನಗಳನ್ನು ಸಂಗ್ರಹಿಸಿ “ಎನ್ ಗುರು ಕಾಫಿ ಆಯ್ತಾ?” ಅನ್ನೋ ಹೆಸರಿನ ಹೊತ್ತಗೆ ಹೊರತಂದಿತ್ತು. ಈ ಸಮ್ಮೇಳನದಲ್ಲಿ ಬನವಾಸಿ ಬಳಗದ ಈ ಮಳಿಗೆ ಸಹ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಈ ಸಂದರ್ಭದಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನಮ್ಮ ಮಳಿಗೆಯ ಬಗ್ಗೆ ಪ್ರಕಟವಾಗಿದ್ದ ಒಂದು ಟಿಪ್ಪಣಿ.

ಮೇಲಕ್ಕೆ

ಬಸವಳಿಯದ ಬನವಾಸಿ ಗೆಳೆಯರು

ಬನವಾಸಿ ಬಳಗ ಇಲ್ಲಿಯವರೆಗೂ ನಡೆಸಿಕೊಂಡು ಬರುತ್ತಿರುವ ಕೆಲಸಗಳ ಬಗ್ಗೆ ಒಂದು ಕಿರುಪರಿಚಯವನ್ನು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು.

ಮೇಲಕ್ಕೆ

ಐ.ಟಿ ಕನ್ನಡಿಗರ ಕೂಟ

ನಾಡಿನ ಪ್ರತಿ ಕೈಗಳಿಗೂ ದುಡಿಯಲು ಕೆಲಸವೇನೋ ಬೇಕು? ಈ ಗುರಿಯತ್ತ ನಮ್ಮ ನಾಡು ಸಾಗುವಲ್ಲಿ ನಮ್ಮ ಪಾತ್ರವೇನು? ಎಂಬ ಬಗ್ಗೆ ಬನವಾಸಿ ಬಳಗ ಆಯೋಜಿಸಿದ್ದ “ಅಂತರ್ಜಾಲ ಕನ್ನಡಿಗರ ಕೂಟ”ಕ್ಕೆ ವೃತ್ತಿಪರ ಕನ್ನಡಿಗರ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು. ಇದರ ಬಗ್ಗೆ ’ಕನ್ನಡ ಪ್ರಭ’ ಪತ್ರಿಕೆಯಲ್ಲಿ ಬಂದಿರುವ ವರದಿ.

ಮೇಲಕ್ಕೆ

ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಯ ಅಂತರ್ಜಾಲ ತಾಣದಲ್ಲಿ ಕನ್ನಡ

ಅಂತರ್ಜಾಲ ಸೇರಿದಂತೆ ಬದುಕಿನ ಎಲ್ಲಾ ಆಯಾಮದಲ್ಲೂ ಕನ್ನಡದ ಬಳಕೆ ಆಗಬೇಕು. ಈ ಕುರಿತಂತೆ ಹಿಂದೆ ಬೆಂಗಳೂರಿನ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಯ ಅಂತರ್ಜಾಲ ತಾಣ ಕನ್ನಡದಲ್ಲಿ ಬರಬೇಕೆಂದು ಸಾರ್ವಜನಿಕ ಒತ್ತಾಯ ಕೇಳಿ ಬಂದಿತ್ತು. ಇದಕ್ಕೆ ಬನವಾಸಿ ಬಳಗವೂ ಸಹ ದನಿಗೂಡಿಸಿತ್ತು. ಇದಕ್ಕೆ ಸ್ಪಂದಿಸಿದ ಕಚೇರಿ ಅಧಿಕಾರಿಗಳು ಅಂತರ್ಜಾಲದಲ್ಲಿ ಕನ್ನಡವನ್ನು ಯುನಿಕೋಡ್ ಬಳಸಿ ಜಾರಿಗೆ ತರಲು ನಮ್ಮ ಸಹಾಯ ಕೇಳಿತ್ತು. ಅಲ್ಲಿನ ಅಧಿಕಾರಗಳ ಜೊತೆ ಕೈಜೋಡಿಸಿ ನಾವು ಪಾಸ್ ಪೋರ್ಟ್ ತಾಣದಲ್ಲಿ ಕನ್ನಡವನ್ನು ತರಲು ಯಶಸ್ವಿಯಾದೆವು. ಇದರ ಕುರಿತು ದಿ ಹಿಂದೂ ಪತ್ರಿಕೆಯಲ್ಲಿ ಬಂದ ವರದಿ

ಮೇಲಕ್ಕೆ

“ಬೆಳಗಲಿ ನಾಡ ನಾಳೆಗಳು” ಹೊತ್ತಗೆ ಬಿಡುಗಡೆ

ಬನವಾಸಿ ಬಳಗ ಪ್ರಕಾಶನ ಹೊರತಂದಿರುವ ಶ್ರೀ ಪ್ರಿಯಾಂಕ್ ಕತ್ತಲಗಿರಿ ಅವರು ಸಂಪಾದಿಸಿರುವ “ಬೆಳಗಲಿ ನಾಡ ನಾಳೆಗಳು” ಹೊತ್ತಗೆ ಬಿಡುಗಡೆ ಸಮಾರಂಭದ ಪತ್ರಿಕಾ ವರದಿಗಳು ಇಲ್ಲಿವೆ. ಕಲಿಕೆಯಲ್ಲಿ ತಾಯಿ ನುಡಿ ಪಾತ್ರದ ಮಹತ್ವದ ಬಗ್ಗೆ ಈ ಪುಸ್ತಕದಲ್ಲಿ ಹಲವಾರು ಅಂಕಣಗಳ ಮೂಲಕ ಹೇಳಲಾಗಿದೆ.

ಶಿಕ್ಷಣ ಸಚಿವರಿಗೆ ಬನವಾಸಿ ಬಳಗದ ವತಿಯಿಂದ ಮನವಿ ಪತ್ರ

ಹೊಸದಾಗಿ ಶಿಕ್ಷಣ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರ ಅವರನ್ನು ಬನವಾಸಿ ಬಳಗದ ಸದಸ್ಯರು ಬೆಂಗಳೂರಿನಲ್ಲಿ ಭೇಟಿ ಮಾಡಿ, ಬಳಗದ ವತಿಯಿಂದ ಮನವಿ ಪತ್ರವೊಂದನ್ನು ನೀಡಿದ್ದರು. ಕರ್ನಾಟಕದ ಶಿಕ್ಷಣ ಕ್ಷೇತ್ರವನ್ನು ಕಾಡುತ್ತಿರುವ ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತಾ, ಅವನ್ನು ಸರಿದೂಗಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವ ಮನವಿ ಪತ್ರವಿದಾಗಿತ್ತು. ಈ ಬಗ್ಗೆ ದಿನಪತ್ರಿಕೆಗಳಲ್ಲಿ ಮೂಡಿ ಬಂದಿದ್ದ ವರದಿ.

pv_kimmanevk_kimmanevv_kimmane

 

kp_kimmane

 

 

ಮೇಲಕ್ಕೆ

ಏನ್ ಗುರು ಕಾಫಿ ಆಯ್ತಾ? ಬ್ಲಾಗ್