ಬನವಾಸಿ ಬಳಗ

ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಕನ್ನಡ ದೇಶಮಂ

ಪ್ರಕಾಶನ

“ಸೊಗಸಾಗಿ ಮೂಡಿಬಂದ ಸಂವಾದ ಕಾರ್ಯಕ್ರಮ”

ಟೋಟಲ್ ಕನ್ನಡ ಹೊತ್ತಗೆಯಂಗಡಿಯಲ್ಲಿ ರವಿವಾರ, ಮಾರ್ಚ್ 15ರಂದು ಬನವಾಸಿ ಬಳಗ ಪ್ರಕಾಶನವು ನಡೆಸಿಕೊಟ್ಟ ಕನ್ನಡದಂಗಳದಲ್ಲಿ ತಿಂಗಳ ಮಾತುಕತೆ ಕಾರ್ಯಕ್ರಮದಲ್ಲಿ, ಕರ್ನಾಟಕ ಒಡೆಯುವ ಕೂಗೆದ್ದಿರುವ ಹೊತ್ತಿನಲ್ಲಿ ಕರ್ನಾಟಕ ಒಡೆದರೆ ಕನ್ನಡಿಗರೆಲ್ಲರಿಗೂ ಆಗುವ ತೊಂದರೆಗಳೇನು ಅನ್ನುವ ಬಗ್ಗೆ “ಕರ್ನಾಟಕವೊಂದೇ – ಒಡಕು ತರಲಿದೆ ಕೆಡುಕು” ಅನ್ನುವ ಪುಸ್ತಕ ಬರೆದಿರುವ ಯುವ ಕನ್ನಡಪರ ಚಿಂತಕ ಮತ್ತು ಉದಯವಾಣಿಯ ಜನಪ್ರಿಯ ಅಂಕಣ “ಕನ್ನಡ ಜಗತ್ತು”ವಿನ ಬರಹಗಾರ ವಸಂತ ಶೆಟ್ಟಿ ಅವರು ಮಾತನಾಡಿದರು. ಕಾರ್ಯಕ್ರಮದ ಕೆಲ ಫೋಟೋಗಳು ಇಲ್ಲಿವೆ.

IMG_20150315_190120

IMG_20150315_190313

IMG_20150315_191546

IMG_20150315_191644

IMG_20150315_191657

IMG_20150315_195342

“ಸೊಗಸಾಗಿ ಮೂಡಿಬಂದ ಸಂವಾದ ಕಾರ್ಯಕ್ರಮ”

ಟೋಟಲ್ ಕನ್ನಡ ಹೊತ್ತಗೆಯಂಗಡಿಯಲ್ಲಿ ನವೆಂಬರ್ 9 ರಂದು ಸಂಜೆ 7 ಗಂಟೆಗೆ ಬನವಾಸಿ ಬಳಗ ಪ್ರಕಾಶನವು ನಡೆಸಿಕೊಟ್ಟ ಕನ್ನಡದಂಗಳದಲ್ಲಿ ತಿಂಗಳ ಮಾತುಕತೆ ಕಾರ್ಯಕ್ರಮ ಸೊಗಸಾಗಿ ಮೂಡಿಬಂದಿತು. ಕಾರ್ಯಕ್ರಮದಲ್ಲಿ “ಕನ್ನಡ ರಾಜ್ಯೋತ್ಸವದ ಸಂಭ್ರಮ ಮತ್ತು ಕನ್ನಡಿಗ” ಅನ್ನುವ ವಿಷಯದ ಬಗ್ಗೆ “ಕನ್ನಡ ಡಿಂಡಿಮ” ಹೆಸರಿನ ಕನ್ನಡ, ಕನ್ನಡಿಗ, ಕರ್ನಾಟಕ ಪರ ಚಿಂತನೆಗೊಳಪಡಿಸುವ ಸರಣಿ ಬರಹಗಳ ಹೊತ್ತಗೆಯ ಸಂಪಾದಕರಾದ ಶ್ರೀ ಜಿ.ಆನಂದ್ ಅವರು ಮಾತನಾಡಿದರು.

IMG-20141109-WA0017

“ಸೊಗಸಾಗಿ ಮೂಡಿಬಂದ ಕಾರ್ಯಕ್ರಮ”

ಸೆಪ್ಟೆಂಬರ್ 14ರಂದು, ಭಾರತ ಒಕ್ಕೂಟದ ಭಾಷಾ ನೀತಿಯ ತೊಂದರೆಗಳನ್ನು ತೆರೆದಿಡುವ ಹೊಸ ಕಿರು ಪುಸ್ತಕ “ಹಿಂದಿ ಹೇರಿಕೆ”ಯ ಬಿಡುಗಡೆ ಮತ್ತು ಭಾರತದ ಹುಳುಕಿನ ಭಾಷಾನೀತಿಯ ಹತ್ತಾರು ಮುಖಗಳನ್ನು ತೆರೆದಿಡುವ ಛಾಯಾಚಿತ್ರ ಪ್ರದರ್ಶನವನ್ನು ಬನವಾಸಿ ಬಳಗ ಪ್ರಕಾಶನವು ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿರುವ ಮನೋರಮಾ ಹಾಲ್ ನಲ್ಲಿ ಹಮ್ಮಿಕೊಂಡಿತ್ತು. ಕಾರ್ಯಕ್ರಮವು ಸೊಗಸಾಗಿ ಮೂಡಿಬಂದಿತು.

ಕಾರ್ಯಕ್ರಮದ ಕೆಲವು ಚಿತ್ರಗಳು ಇಲ್ಲಿವೆ:

IMG_0706 IMG_0752
IMG_0727 IMG_0742
IMG_0705 IMG_0700
IMG_0689

ಸ್ವಾತಂತ್ರ್ಯ ಮತ್ತು ಕನ್ನಡನಾಡು

ಬನವಾಸಿ ಬಳಗ ಪ್ರಕಾಶನ ಮತ್ತು ಟೋಟಲ್‍ಕನ್ನಡ ಹೊತ್ತಗೆಯಂಗಡಿ ಜೊತೆಗೂಡಿ ಆಗಸ್ಟ್ ತಿಂಗಳ 10ನೇ ತಾರೀಕಿನಂದು “ಸ್ವಾತಂತ್ರ್ಯ ಮತ್ತು ಕನ್ನಡ ನಾಡು” ಎಂಬ ವಿಶಯದ ಸುತ್ತ ಮಾತುಕತೆ ಹಮ್ಮಿಕೊಂಡಿತ್ತು. ಈ ಕಾರ‍್ಯಕ್ರಮದಲ್ಲಿ ಬರಹಗಾರರಾದ ಶ್ರೀ ಆನಂದ್ ಅವರು ಮಾತನಾಡಿದರು. ಅವರ ಮಾತುಗಳ ವಿಡಿಯೋ ತುಣುಕು ಇಲ್ಲಿದೆ



ಕಾರ್ಯಕ್ರಮದ ಕೆಲವು ಚಿತ್ರಗಳು

smkn1 smkn2
smkn3 smkn4

“ಕನ್ನಡ ಕೇಂದ್ರಿತ ರಾಜಕಾರಣದ ಅಗತ್ಯ” ಸಂವಾದ ಕಾರ್ಯಕ್ರಮ

ಟೋಟಲ್ ಕನ್ನಡ ಹೊತ್ತಗೆಯಂಗಡಿಯಲ್ಲಿ 29ನೇ ಮಾರ್ಚ್ 2014 ರ ಶನಿವಾರದಂದು ನಡೆದ ಕನ್ನಡದಂಗಳದಲ್ಲಿ ತಿಂಗಳ ಮಾತುಕತೆ ಕಾರ್ಯಕ್ರಮದಲ್ಲಿ “ಕನ್ನಡ ಕೇಂದ್ರಿತ ರಾಜಕಾರಣದ ಅಗತ್ಯ” ಅನ್ನುವ ವಿಷಯದ ಬಗ್ಗೆ “ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ” ಹೊತ್ತಗೆಯ ಬರಹಗಾರರಾದ ಶ್ರೀ ಜಿ.ಆನಂದ್ ಅವರು ಮಾತನಾಡಿದರು. ಕನ್ನಡ ಕೇಂದ್ರಿತ ರಾಜಕಾರಣದ ಅಗತ್ಯವನ್ನು ಹಲವು ಮಾಹಿತಿಗಳೊಂದಿಗೆ ಸೊಗಸಾಗಿ ವಿವರಿಸಿದರು.

ಕಾರ್ಯಕ್ರಮದ ವಿಡಿಯೋ ಇಲ್ಲಿದೆ :

“ನಾಳೆಯತ್ತ ಕನ್ನಡ” ಸಂವಾದ ಕಾರ್ಯಕ್ರಮ

ಟೋಟಲ್ ಕನ್ನಡ ಹೊತ್ತಗೆಯಂಗಡಿಯಲ್ಲಿ ಶನಿವಾರ, ಮಾರ್ಚ್ ಒಂದರಂದು ಸಂಜೆ 7 ಗಂಟೆಗೆ ನಡೆದ ಕನ್ನಡದಂಗಳದಲ್ಲಿ ತಿಂಗಳ ಮಾತುಕತೆ ಕಾರ್ಯಕ್ರಮ ಸೊಗಸಾಗಿ ಮೂಡಿಬಂದಿತು. ಬನವಾಸಿ ಬಳಗ ಪ್ರಕಾಶನವು ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ, “ನಾಳೆಯತ್ತ ಕನ್ನಡ – ಚೆಲುವ ಕನ್ನಡ ನಾಡಿಗಾಗಿ ನುಡಿ ಕಟ್ಟುಕೊಳ್ಳುವಿಕೆ” ಅನ್ನುವ ವಿಶಯದ ಬಗ್ಗೆ ಶ್ರೀ ಪ್ರಿಯಾಂಕ್ ಕತ್ತಲಗಿರಿ ಅವರು ಮಾತನಾಡಿದರು. ಕನ್ನಡವು ಎಲ್ಲಾ ವಲಯಗಳಲ್ಲಿ ಬಳಕೆಗೊಳ್ಳಲು ಸಜ್ಜುಗೊಳ್ಳಬೇಕಿದೆ. ಸಜ್ಜುಗೊಳಿಸುವ ಕೆಲಸವನ್ನು ನಾವು ಕನ್ನಡಿಗರೇ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಏನೇನು ಮಾಡಬಹುದು? ಈಗಾಗಲೇ ಎಂತಹ ಕೆಲಸಗಳು ನಡೆಯುತ್ತಿವೆ? ನಾಳೆಗಳಿಗೆ ಕನ್ನಡವನ್ನು ಕಟ್ಟಿಕೊಳ್ಳುವುದು ಯಾಕೆ “ಆಗಲೇಬೇಕಾದ” ಕೆಲಸವಾಗಿದೆ? ಎಂಬಿತ್ಯಾದಿ ವಿಶಯಗಳ ಸುತ್ತ ಪ್ರಿಯಾಂಕ್ ಅವರು ಮಾತನಾಡಿದರು. ಪ್ರಿಯಾಂಕ್ ಅವರು “ಬೆಳಗಲಿ ನಾಡ ನಾಳೆಗಳು” ಅನ್ನುವ ಹೆಸರಿನ, ಕಲಿಕಾ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುವ ಹೊತ್ತಗೆಯ ಸಂಪಾದಕರು. ಕಾರ್ಯಕ್ರಮದ ವಿಡಿಯೋ ಇಲ್ಲಿದೆ:

“ನುಡಿಹಮ್ಮುಗೆ ಮತ್ತು ಡಬ್ಬಿಂಗ್” ಸಂವಾದ ಕಾರ್ಯಕ್ರಮ

ಟೋಟಲ್ ಕನ್ನಡ ಹೊತ್ತಗೆಯಂಗಡಿಯಲ್ಲಿ ಕಳೆದ ಶನಿವಾರ, 25ನೇ ಜನವರಿ 2014 ರಂದು ಸಂಜೆ 7 ಗಂಟೆಗೆ ನಡೆದ ಕನ್ನಡದಂಗಳದಲ್ಲಿ ತಿಂಗಳ ಮಾತುಕತೆ ಕಾರ್ಯಕ್ರಮ ಸೊಗಸಾಗಿ ಮೂಡಿಬಂದಿತು. ಸಂವಾದದಲ್ಲಿ “ನುಡಿಹಮ್ಮುಗೆ ಮತ್ತು ಡಬ್ಬಿಂಗ್” ಅನ್ನುವ ವಿಶಯದ ಬಗ್ಗೆ “ಡಬ್ಬಿಂಗ್ – ಕನ್ನಡಿಗರ ಆಯ್ಕೆ ಸ್ವಾತಂತ್ರ್ಯದ ಹಕ್ಕೊತ್ತಾಯ” ಹೊತ್ತಗೆಯ ಬರಹಗಾರರಾದ ಶ್ರೀ ಜಿ.ಆನಂದ್ ಅವರು ಮಾತನಾಡಿದರು.

ಕಾರ್ಯಕ್ರಮದ ಮೊದಲನೇ ವಿಡಿಯೋ ತುಣುಕು ಇಲ್ಲಿದೆ:


ಕಾರ್ಯಕ್ರಮದ ಎರಡನೇ ವಿಡಿಯೋ ತುಣುಕು ಇಲ್ಲಿದೆ: 

“ಕನ್ನಡದ ಸಾಧ್ಯತೆ ಹೆಚ್ಚಿಸುವಲ್ಲಿ ಕನ್ನಡ ಗ್ರಾಹಕ ಚಳವಳಿಯ ಪಾತ್ರ” ಸಂವಾದ ಕಾರ್ಯಕ್ರಮ

ಟೋಟಲ್ ಕನ್ನಡ ಹೊತ್ತಗೆಯಂಗಡಿಯಲ್ಲಿ ನಡೆದ ಕನ್ನಡದಂಗಳದಲ್ಲಿ ತಿಂಗಳ ಮಾತುಕತೆ ಕಾರ್ಯಕ್ರಮದಲ್ಲಿ “ಕನ್ನಡದ ಸಾಧ್ಯತೆ ಹೆಚ್ಚಿಸುವಲ್ಲಿ ಕನ್ನಡ ಗ್ರಾಹಕ ಚಳವಳಿಯ ಪಾತ್ರ” ಅನ್ನುವ ವಿಷಯದ ಬಗ್ಗೆ ಸಂವಾದವನ್ನು ಉದಯವಾಣಿ ಪತ್ರಿಕೆಯ “ಕನ್ನಡ ಜಗತ್ತು” ಅಂಕಣದ ಬರಹಗಾರರಾದ ಶ್ರೀ ವಸಂತ್ ಶೆಟ್ಟಿಯವರು ಯಶಸ್ವಿಯಾಗಿ ನಡೆಸಿಕೊಟ್ಟರು. ಕನ್ನಡವು ಬೇರೆ ಬೇರೆ ವಲಯಗಳಲ್ಲಿ ಹೆಚ್ಚೆಚ್ಚು ಬಳಕೆಗೆ ಬರಬೇಕೆಂದರೆ, ಗ್ರಾಹಕರಾಗಿ ನಾವು ಏನು ಮಾಡಬಹುದು ಎಂಬುದರ ಬಗ್ಗೆ ವಿವರಿಸಿದರು. ಸರಣಿ ವಿಡಿಯೋ ನಿಮ್ಮ ನೋಡಿಗಾಗಿ ಇಲ್ಲಿದೆ:

ತುಣುಕು – 1

ತುಣುಕು – 2

ತುಣುಕು – 3

ತುಣುಕು – 4

 

“ಕರ್ನಾಟಕ ಏಕೀಕರಣ – ನಾಡೊಂದಾದ ಕಥೆ” ಸಂವಾದ ಕಾರ್ಯಕ್ರಮ

ಟೋಟಲ್ ಕನ್ನಡ ಹೊತ್ತಗೆಯಂಗಡಿಯಲ್ಲಿ ಕಳೆದ ಶನಿವಾರ, 16-ನವೆಂಬರ್-2013 ರಂದು ನಡೆದ ಕನ್ನಡದಂಗಳದಲ್ಲಿ ತಿಂಗಳ ಮಾತುಕತೆ ಕಾರ್ಯೊಕ್ರಮದಲ್ಲಿ “ಕರ್ನಾಟಕ ಏಕೀಕರಣ – ನಾಡೊಂದಾದ ಕಥೆ” ಅನ್ನುವ ವಿಚಾರದ ಬಗ್ಗೆ ಬನವಾಸಿ ಬಳಗದ ಅಧ್ಯಕ್ಷರು, ಬರಹಗಾರರು ಆದ ಶ್ರೀ ಜಿ.ಆನಂದ್ ಅವರು ಮಾತನಾಡಿದರು. ಆನಂದ್ ಅವರು “ಹಿಂದೀ ಹೇರಿಕೆ – ಮೂರು ಮಂತ್ರ : ನೂರು ತಂತ್ರ”, “ಏನ್ ಗುರು ಕಾಫಿ ಆಯ್ತಾ?”, “ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ” ಹೊತ್ತಗೆಗಳ ಬರಹಗಾರರು. ಅವರ ಹೊತ್ತಗೆಗಳ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ಕಿಸಿ : https://banavasibalaga.org/pustakagalu/

ಕಾರ್ಯಕ್ರಮದ ವಿಡಿಯೋ ಇಲ್ಲಿ ನೋಡಬಹುದು.

ತುಣುಕು-1

ತುಣುಕು-2

 

 

 “ಮಂದಿಯಾಳ್ವಿಕೆ ಮತ್ತು ಭಾರತದ ಸ್ವರೂಪ” ಸಂವಾದ ಕಾರ್ಯಕ್ರಮ
ಟೋಟಲ್ ಕನ್ನಡ ಹೊತ್ತಗೆಯಂಗಡಿಯಲ್ಲಿ ಶನಿವಾರ, 19-ಅಕ್ಟೋಬರ್-2013 ರಂದು ನಡೆದ ಕನ್ನಡದಂಗಳದಲ್ಲಿ ತಿಂಗಳ ಮಾತುಕತೆ ಕಾರ‍್ಯಕ್ರಮದಲ್ಲಿ “ಮಂದಿಯಾಳ್ವಿಕೆ ಮತ್ತು ಭಾರತದ ಸ್ವರೂಪ” ಅನ್ನುವ ವಿಚಾರದ ಬಗ್ಗೆ ಬರಹಗಾರರಾದ ಶ್ರೀ ಕಿರಣ್ ಬಾಟ್ನಿ ಅವರು ಮಾತನಾಡಿದರು. ಕಿರಣ್ ಬಾಟ್ನಿ ಅವರು “ಮಂದಿಯಾಳ್ವಿಕೆಯಲ್ಲಿ ಕನ್ನಡಿಗ”ಹೊತ್ತಗೆಯ ಬರಹಗಾರರು. ಹೊತ್ತಗೆಯ ಬಗ್ಗೆ ತಿಳಿಯಲು ಈ ಕೊಂಡಿಗೆ ಭೇಟಿ ಕೊಡಿ: https://banavasibalaga.org/pustakagalu/

ಕಾರ್ಯಕ್ರಮದ ವಿಡಿಯೋ ಇಲ್ಲಿ ನೋಡಬಹುದು.

ತುಣುಕು – 1

ತುಣುಕು – 2

ತುಣುಕು – 3

“ಭಾರತಕ್ಕೊಪ್ಪುವ ಭಾಷಾನೀತಿ” ಸಂವಾದ ಕಾರ್ಯಕ್ರಮ
ಬೆಂಗಳೂರಿನ ಜಯನಗರದಲ್ಲಿರುವ ಟೋಟಲ್ ಕನ್ನಡ ಹೊತ್ತಗೆಯಂಗಡಿಯಲ್ಲಿ ಸೆಪ್ಟೆಂಬರ್ 14ರಂದು ನಡೆದ ಕನ್ನಡದಂಗಳದಲ್ಲಿ ತಿಂಗಳ ಮಾತುಕತೆ ಕಾರ‍್ಯಕ್ರಮದಲ್ಲಿ “ಭಾರತಕ್ಕೊಪ್ಪುವ ಭಾಷಾನೀತಿ” ಅನ್ನುವ ವಿಚಾರದ ಬಗ್ಗೆ ಬನವಾಸಿ ಬಳಗದ ಅಧ್ಯಕ್ಷರಾದ ಶ್ರೀ ಜಿ.ಆನಂದ್ ಅವರು ಮಾತನಾಡಿದರು. ಜಿ. ಆನಂದ್ ಅವರು “ಹಿಂದೀ ಹೇರಿಕೆ – ಮೂರು ಮಂತ್ರ : ನೂರು ತಂತ್ರ” ಅನ್ನುವ ಹೆಸರಿನ ಹಿಂದೀ ಹೇರಿಕೆಯ ಬಗ್ಗೆ ಕಣ್ತೆರೆಸುವ ಮಾಹಿತಿಗಳನ್ನೊಳಗೊಂಡ ಹೊತ್ತಗೆಯ ಬರಹಗಾರರು.ಕಾರ್ಯಕ್ರಮದ ವಿಡಿಯೋ ಇಲ್ಲಿ ನೋಡಬಹುದು.

ಭಾಗ – 1

ಭಾಗ – 2

ಭಾಗ – 3

“ಕರ್ನಾಟಕ ಮತ್ತು ಹೊರ ದೇಶಗಳ ಕಲಿಕೆ ಏರ್ಪಾಡು”ಸಂವಾದ ಕಾರ್ಯಕ್ರಮ
ಟೋಟಲ್ ಕನ್ನಡ ಹೊತ್ತಗೆಯಂಗಡಿಯಲ್ಲಿ ಶನಿವಾರ, 24-ಆಗಸ್ಟ್-2013 ರಂದು ನಡೆದ ಕನ್ನಡದಂಗಳದಲ್ಲಿ ತಿಂಗಳ ಮಾತುಕತೆ ಕಾರ್ಯಕ್ರಮದಲ್ಲಿ “ಕರ್ನಾಟಕ ಮತ್ತು ಹೊರ ದೇಶಗಳ ಕಲಿಕೆ ಏರ್ಪಾಡು” ಅನ್ನುವ ವಿಷಯದ ಬಗ್ಗೆ ಬನವಾಸಿ ಬಳಗದ ಯುವ ಬರಹಗಾರರಾದ ಪ್ರಿಯಾಂಕ್ ಕತ್ತಲಗಿರಿ ಅವರು ಸಂವಾದ ಕಾರ್ಯಕ್ರಮವನ್ನು ಸೊಗಸಾಗಿ, ಯಶಸ್ವಿಯಾಗಿ ನಡೆಸಿಕೊಟ್ಟರು. ಪ್ರಿಯಾಂಕ್ ಅವರು “ಬೆಳಗಲಿ ನಾಡ ನಾಳೆಗಳು” ಅನ್ನುವ ಕಲಿಕಾ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುವ ಹೊತ್ತಗೆಯ ಸಂಪಾದಕರು.ಕಾರ್ಯಕ್ರಮದ ವಿಡಿಯೋ ಇಲ್ಲಿ ನೋಡಬಹುದು.

ಭಾಗ – 1

ಭಾಗ – 2

ಭಾಗ – 3

ಭಾಗ – 4

ಬನವಾಸಿ ಬಳಗವು ನಾಡು ನುಡಿಗಳ ಕುರಿತಾಗಿ ಹಲವು ವರ್ಷಗಳಿಂದ ಕನ್ನಡಿಗರಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ನೂರಾರು ಬರಹಗಳನ್ನು ಪ್ರಕಟಪಡಿಸಿದೆ. ಮೊದಲಿಗೆ ಅಂತರ್ಜಾಲ ತಾಣದ ಬ್ಲಾಗ್‌ನಲ್ಲಿ ಹೀಗೆ ಬರಹಗಳನ್ನು ಪ್ರಕಟಪಡಿಸಲಾಗುತ್ತಿತ್ತು. ಆ ಮೂಲಕ ಒಂದು ವರ್ಗದ ಓದುಗರನ್ನು ಮಾತ್ರಾ ಮುಟ್ಟಲು ಸಾಧ್ಯವಾಗುತ್ತಿತ್ತು. ನಾವಿನ್ನೂ ತಲುಪಬೇಕಾದ ಜನರು ಬಹಳಷ್ಟು ಸಂಖ್ಯೆಯಲ್ಲಿರುವ ಕಾರಣದಿಂದಾಗಿ ಈ ಬರಹಗಳನ್ನು ಹೊತ್ತಗೆಯ ರೂಪದಲ್ಲಿ ಅಚ್ಚುಹಾಕಿಸಿ ಹೊರತರಲು ಮುಂದಾದೆವು.

ಕನ್ನಡಿಗರಲ್ಲಿ ಕನ್ನಡತನದ ಜಾಗೃತಿ ತರಲು, ನಮ್ಮ ನಾಡು, ನುಡಿ, ಕಲಿಕೆ, ಆಡಳಿತ ಎಲ್ಲದರ ಬಗ್ಗೆ ಸರಿಯಾದ ನಿಲುವು ತಳೆಯಲು ಎಲ್ಲವನ್ನೂ ಕನ್ನಡದ ಕಣ್ಣಿನಿಂದ ಕಾಣುವ ಚರ್ಚೆ, ಚಿಂತನೆಯ ಅಗತ್ಯ ಕನ್ನಡ ಸಮಾಜದಲ್ಲಿ ಇರುವುದನ್ನು ಮನಗಂಡ ಬನವಾಸಿ ಬಳಗ ತನ್ನದೇ ಆದ ಪ್ರಕಾಶನವೊಂದನ್ನು ಶುರು ಮಾಡಿ ಅದರ ಮೂಲಕ ನಾಡ ಪರ, ಏಳಿಗೆ ಪರವಾದ ಚಿಂತನೆಯ ಸುತ್ತ ಬರೆಯಲ್ಪಟ್ಟ ಚಿಂತನೆ ತುಂಬಿದ ಹೊತ್ತಗೆಗಳನ್ನು ಕನ್ನಡ ಸಮಾಜಕ್ಕೆ ತಲುಪಿಸುವ ಕೆಲಸಕ್ಕೆ ಕೈ ಹಾಕಿದೆ. ಇಲ್ಲಿಯವರೆಗೂ ಐದು ಹೊತ್ತಗೆಗಳನ್ನು ಬನವಾಸಿ ಬಳಗ ಹೊರ ತಂದಿದೆ. ಅವುಗಳ ವಿವರ ಕೆಳಗಿನ ಕೊಂಡಿಯಲ್ಲಿ ನೋಡಿ.

Mandiyalwike swatantra_bharatadalli_atantra_karnataka dindima kv_11

ಬನವಾಸಿ ಬಳಗವು ತನ್ನದೇ ಆದ ಪ್ರಕಾಶನ ಸಂಸ್ಥೆಯನ್ನು ಶುರು ಮಾಡುವ ಮೂಲಕ ಅನೇಕ ಹೊತ್ತಗೆಗಳನ್ನು ಹೊರತರಲು ಮುಂದಾಗಿದೆ ಮತ್ತು ಮುಂದೆಯೂ ನಾಡು ನುಡಿ ನಾಡಿಗರಿಗೆ ಸಂಬಂಧಿಸಿದ ಹೊತ್ತಗೆಗಳನ್ನು ಹೊರತರಲು ಬದ್ಧವಾಗಿದೆ.

ಟ್ವಿಟ್ಟರ್ ನಲ್ಲಿ ಬನವಾಸಿ ಬಳಗ ಪ್ರಕಾಶನವನ್ನು ಹಿಂಬಾಲಿಸಲು ಈ ಕೊಂಡಿಯನ್ನು ಒತ್ತಿ: @bbprakaashana bbp_twitter1 ————————–

ಫೇಸ್‍ಬುಕ್‍ ನಲ್ಲಿರುವ ಬನವಾಸಿ ಬಳಗ ಪ್ರಕಾಶನದ ಪುಟವನ್ನು ಸೇರಲು ಈ ಕೊಂಡಿಯನ್ನು ಒತ್ತಿ:

ಬನವಾಸಿ ಬಳಗ ಪ್ರಕಾಶನ Banavasi Balaga Prakashana

ಏನ್ ಗುರು ಕಾಫಿ ಆಯ್ತಾ? ಬ್ಲಾಗ್